Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಸಂಶೋಧನೆಗಳು.

 1. ಟೆಲಿಫೋನ್ ಕಂಡು ಹಿಡಿದ ವಿಜ್ಞಾನಿ ಯಾರು?

ಅಮೇರಿಕಾದ ಅಲೆಗ್ಸಾಂಡರ್ ಗ್ರಹಾಂಬೆಲ್

2. ದೂರದರ್ಶನವನ್ನು ಕಂಡು ಹಿಡಿದ ವಿಜ್ಞಾನಿ ಯಾರು? 

 ಅಮೇರಿಕಾದ ಜಾನ್ ಲೋಗಿ ಬೇಯರ್ಡ್.

3. ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದವರು ಯಾರು? 

ಇಂಗ್ಲೆಂಡ್ ನ ಸರ್ ಐಸಾಕ್ ನ್ಯುಟನ್. 

4. ಬ್ರೈಲ್ ಲಿಪಿಯನ್ನು ಬಳಕೆಗೆ ತಂದವರು ಯಾರು? 

 ಫ್ರಾನ್ಸ್ ದೇಶದ ಲೂಯಿ ಬ್ರೈಲ್. 

5. ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರ್ ನ ಹೆಸರೇನು? 

ಪರಮ್.

6. ವಿದ್ಯುತ್ ಬಲ್ಬ್ ಅನ್ನು ಶೋದಿಸಿದವರು ಯಾರು? 

 ಅಮೇರಿಕಾದ ಸರ್ ಥಾಮಸ್ ಆಲ್ವಾ ಎಡಿಸನ್. 

7. ದೈನಂದಿನ ಬಳಕೆಯಲ್ಲಿರುವ ಡೈನಮೋ ಇದು ಯಾರ ಕೊಡುಗೆ?

 ಇಂಗ್ಲೆಂಡ್ ನ ಮೈಕಲ್ ಪ್ಯಾರಡೆಯವರ ಕೊಡುಗೆ.

8. ರೆಫ್ರಿಜಿರೇಟರ್ ನ ಶೋಧಕ ಯಾರು? 

ಅಮೇರಿಕಾದ ಜೇಮ್ಸ್ ಹಾರನ್ಸ್.

9. ಮನೋವಿಜ್ಞಾನದ ಪಿತಾಮಹ ಯಾರು? 

ಸಿಗ್ಮಂಡ್ ಫ್ರಾಯಿಡ್. 

10. ಸಿಡಿಮದ್ದನ್ನು  ಶೋಧಿಸಿದವರು ಯಾರು?

ಸ್ವೀಡನ್ ನ ಅಲ್ಫ್ರೆಡ್ ನೊಬೆಲ್ ಶೋಧಿಸಿದರು. 

11.  ರೆಡಿಯೋ ವನ್ನು ಕಂಡು ಹಿಡಿದ ವಿಜ್ಞಾನಿ ಯಾರು?

ಇಟಲಿಯ ಮಾರ್ಕೋನಿ.

12. ಎಕ್ಸರೇಯನ್ನು ಕಂಡು ಹಿಡಿದ ವಿಜ್ಞಾನಿ ಯಾರು? 

ಜರ್ಮನಿಯ ಡಬ್ಲ್ಯೂ. ಕೆ ರೊಂಟೆಜನ್. 

14 . ಮುದ್ರಣ ಯಂತ್ರ ವನ್ನು ಮೊದಲಿಗೆ ಕಂಡು ಹಿಡಿದವರು ಯಾರು? 

ಜರ್ಮನಿ ಯ ಗುಟೇನ್ ಬರ್ಗ್.

15. ಬೆರಳಚ್ಚು ಯಂತ್ರ ವನ್ನು ಕಂಡು ಹಿಡಿದವರು ಯಾರು? 

ಅಮೇರಿಕಾದ ಸೊಲಿಸ್. 

16. ಸಿಡುಬು ರೋಗದ ಚುಚ್ಚು ಮದ್ದನ್ನು ಕಂಡು ಹಿಡಿದವರು ಯಾರು? 

ಇಂಗ್ಲೆಂಡ್ ನ ಎಡ್ವರ್ಡ್ ಜನ್ನರ್. 

17. ಡಿಸೈಲ್ ಎಂಜಿನ್ ಇದು ಯಾರ ಶೋಧನೆಯ ಫಲ? 

ಜರ್ಮನಿಯ ರೂಡೋಲ್ಫ ಡಿಸೈಲ್‌. 

18. ವಿಮಾನ ವನ್ನು ಯಾರು ಕಂಡುಹಿಡಿದರು? 

ರೈಟ್ ಸಹೋದರರು. 

19. ಕ್ಯಾಮರಾದ ರೂಲು ಫಿಲ್ಮನ್ನು ಯಾರು ಶೋಧಿಸಿ ದರು.? 

ಅಮೇರಿಕಾದ ಜಾರ್ಜ್ ಈಸ್ಟಮನ್. 

20. ದೂರದರ್ಶಕ ಯಂತ್ರ ವನ್ನು ಮೊದಲಿಗೆ ಕಂಡುಹಿಡಿದವರು ಯಾರು?  

ಇಟಲಿಯ ಗೆಲಿಲಿಯೊ. 

21. ಸೂಕ್ಷ್ಮ ದರ್ಶಕ ಯಂತ್ರ ಕಂಡುಹಿಡಿದ ವಿಜ್ಞಾನಿ ಯಾರು? 

ಲ್ಯೂವನ್ ಹಾಕ್. 

22. ಅಣು ವಿಜ್ಞಾನಿ ಎಂದು ಖ್ಯಾತಿ ಪಡೆದವರು ಯಾರು? 

ಭಾರತದ ಹೋಮಿ ಜಹಾಂಗೀರ್ ಬಾಬಾ. 

ಧನ್ಯವಾದಗಳು.. 


Comments

Popular posts from this blog

ಚೊಚ್ಚಲ ತಾಯ್ತನ.

ವರ್ಣ ಮಾಲೆಗಳು..