ವರ್ಣ ಮಾಲೆಗಳು..
ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.
ಕ,ಖ,ಗ,ಘ,ಙ.
ಚ,ಛ,ಜ,ಝ,ಞ.
ಟ,ಠ,ಡ,ಢ,ಣ.
ತ,ಥ,ದ,ಧ,ನ.
ಪ,ಫ,ಬ,ಭ,ಮ.
ಯ,ರ,ಲ,ವ,ಶ,ಷ,ಸ,ಹ,ಳ.
"ವರ್ಣಮಾಲೆ ಹಾಗೂ ಅವುಗಳ ವಿಧಗಳು''
ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.
ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ,
1. ಸ್ವರಗಳು.
2. ವ್ಯಂಜನಗಳು.
3. ಯೋಗವಾಹಗಳು.
1. ಸ್ವರಗಳು.
ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.
ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ,
೧. ಹೃಸ್ವ ಸ್ವರ.
ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.
ಅವುಗಳೆಂದರೆ: ಅ, ಇ, ಉ, ಋ, ಎ, ಒ.
೨.ದೀರ್ಘ ಸ್ವರ.
ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.
ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.
೩. ಪ್ಲುತ ಸ್ವರ.
ಎರಡಕ್ಕಿಂತ ಹೆಚ್ಚು ಮಾತ್ರ ಕಾಲವಧಿಯಲ್ಲಿ, ಅಥವಾ ಮೂರು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಪ್ಲುತ ಸ್ವರ ಎನ್ನುತ್ತಾರೆ.
ಇವುಗಳನ್ನು " sss " ಎಂಬ ಚಿಹ್ನೆಯಿಂದ ಗುರುತಿಸಲಾಗುತ್ತದೆ.
2. ವ್ಯಂಜನಗಳು.
ಯಾವ ಅಕ್ಷರಗಳು ಸ್ವರದ ಸಹಾಯದಿಂದ ಉಚ್ಛರಿಸಲ್ಪಡುತ್ತದೆಯೋ ಅಂತಹ ಅಕ್ಷರಗಳನ್ನು ವ್ಯಂಜನಗಳು ಎನ್ನುತ್ತೇವೆ. ಒಂದು ಪೂರ್ಣ ವ್ಯಂಜನವು ದೊರಕಬೇಕೆಂದರೆ ಅದಕ್ಕೆ ಸ್ವರದ ಸಹಾಯ ಅಗತ್ಯ.
ಉದಾಹರಣೆಗೆ: " ಕ್ " ಎನ್ನುವುದು ಒಂದು ವ್ಯಂಜನ. ಆದರೆ ಇದು ಅರ್ಧ ವ್ಯಂಜನವಾಗಿದೆ. ಇದು ಪೂರ್ಣ ರೂಪ ಪಡೆಯಬೇಕೆಂದರೆ ಅದಕ್ಕೆ ಯಾವುದಾದರೂ ಒಂದು ಸ್ವರ ಬೇಕೆ ಬೇಕು.
"ಕ್" ಎನ್ನುವ ವ್ಯಂಜನಕ್ಕೆ "ಅ" ಎನ್ನುವ ಸ್ವರ ಸೇರಿದಾಗ "ಕ" ಎನ್ನುವ ಪೂರ್ಣ ವ್ಯಂಜನ ಲಭ್ಯವಾಗುತ್ತದೆ.
ವ್ಯಂಜನಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ,
೧. ವರ್ಗೀಯ ವ್ಯಂಜನಗಳು
೨. ಅವರ್ಗೀಯ ವ್ಯಂಜನಗಳು.
೧. ವರ್ಗೀಯ ವ್ಯಂಜನಗಳು:
ಅಕ್ಷರಗಳು ಅವುಗಳು ಹುಟ್ಟುವ ಸ್ಥಳಗಳನ್ನು ಆಧರಿಸಿ ಐದು ವರ್ಗಗಳನ್ನಾಗಿ ವಿಭಾಗಿಸಲಾಗಿದೆ.
ಕ್, ಖ್, ಗ್, ಘ್, ಙ್. = ಕಂಠದ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಕಂಠ್ಯಾಕ್ಷರಗಳು ಎನ್ನುತ್ತೇವೆ.
ಚ್, ಛ್, ಜ್, ಝ್, ಞ್, = ತಾಲುವಿನ / ದವಡೆಯ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ತಾಲುವ್ಯಾಕ್ಷರಗಳು ಎನ್ನುತ್ತೇವೆ.
ಟ್, ಠ್, ಡ್, ಢ್, ಣ್ = ಮೂರ್ಧಾನ್ಯದ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಮೂರ್ಧಾನ್ಯಾಕ್ಷರಗಳು ಎನ್ನುತ್ತೇವೆ
ತ್, ಥ್, ದ್, ಧ್, ನ್= ದಂತದ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ದಂತ್ಯಾಕ್ಷರಗಳು ಎನ್ನುತ್ತೇವೆ..
ಪ್, ಫ್, ಬ್, ಭ್, ಮ್ = ತುಟಿಗಳ/ ಓಷ್ಠ್ಯದ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಓಷ್ಠ್ಯಾಕ್ಷರಗಳು ಎನ್ನುತ್ತೇವೆ.
ವರ್ಗೀಯ ವ್ಯಂಜನಗಳಲ್ಲಿ ಮೂರು ವಿಧಗಳಿವೆ.
1. ಅಲ್ಪ ಪ್ರಾಣ.
2. ಮಹಾಪ್ರಾಣ.
3. ಅನುನಾಸಿಕ.
1. ಅಲ್ಪಪ್ರಾಣ ಅಕ್ಷರಗಳು. - "ಅಲ್ಪ" ಎಂದರೆ "ಕಡಿಮೆ". "ಪ್ರಾಣ" ಎಂದರೆ "ಉಸಿರು". ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಅಲ್ಪಪ್ರಾಣ ಅಕ್ಷರಗಳು ಎನ್ನುತ್ತೇವೆ. ವರ್ಗದ ಮೊದಲ ಮತ್ತು ಮೂರನೆಯ ಅಕ್ಷರಗಳನ್ನು ಅಲ್ಪಪ್ರಾಣ ಅಕ್ಷರಗಳು ಎನ್ನುತ್ತಾರೆ. ಅವುಗಳೆಂದರೆ,
ಕ. ಚ. ಟ. ತ. ಪ. ಗ. ಜ. ಡ. ದ. ಬ. =10.
2. ಮಹಾಪ್ರಾಣ ಅಕ್ಷರಗಳು. - "ಮಹಾ" ಎಂದರೆ "ಹೆಚ್ಚು". "ಪ್ರಾಣ" ಎಂದರೆ "ಉಸಿರು". ಅಂದರೆ ಹೆಚ್ಚು ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಮಹಾಪ್ರಾಣ ಅಕ್ಷರಗಳು ಎನ್ನುತ್ತಾರೆ. ವರ್ಗದ ಎರಡು ಮತ್ತು ನಾಲ್ಕನೇ ಅಕ್ಷರಗಳನ್ನು ಮಹಾಪ್ರಾಣ ಅಕ್ಷರಗಳು ಎನ್ನುತ್ತಾರೆ. ಅವುಗಳೆಂದರೆ,
ಖ. ಛ. ಠ. ಥ. ಫ. ಘ. ಝ. ಢ. ಧ. ಭ. =10.
3. ಅನುನಾಸಿಕ ಅಕ್ಷರಗಳು- ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳನ್ನು ಅನುನಾಸಿಕ ಅಕ್ಷರಗಳು ಎನ್ನುತ್ತಾರೆ. ಅವುಗಳೆಂರೆ,,
ಙ. ಞ. ಣ. ನ. ಮ. = 5.
ಅಲ್ಪಪ್ರಾಣ ಅಕ್ಷರಗಳು 10, ಮಹಾಪ್ರಾಣ ಅಕ್ಷರಗಳು 10, ಅನುನಾಸಿಕ ಅಕ್ಷರಗಳು 5, ಒಟ್ಟು ವರ್ಗೀಯ ವ್ಯಂಜನಗಲ್ಲಿ 25 ಅಕ್ಷರಗಳಿವೆ.
೨. ಅವರ್ಗೀಯ ವ್ಯಂಜನಗಳು.
ಈ ಅಕ್ಷರಗಳು ಹುಟ್ಟುವ ಸ್ಥಳಗಳು ಬೇರೆ ಬೇರೆ ಆಗಿರುವುದರಿಂದ, ಇವುಗಳನ್ನು ಅವರ್ಗೀಯ ವ್ಯಂಜನಗಳು ಎನ್ನುತ್ತಾರೆ.
ಯ. ರ. ಲ. ವ. ಶ. ಷ. ಸ. ಹ. ಳ. =9
3. ಯೋಗವಾಹಗಳು..
"ಯೋಗ " ಎಂದರೆ "ಜೊತೆ" "ವಾಹ" ಎಂದರೆ "ಹೋಗು" ಅಂದರೆ "ಜೊತೆಗೂಡಿ ಹೋಗು" ಎಂದರ್ಥ. ಯೋಗವಾಹದ ಅಕ್ಷರಗಳು ಎಂದಿಗೂ ಕೂಡ ಪ್ರತ್ಯೇಕವಾಗಿ ಉಚ್ಛರಿಸಲ್ಪಡುವುದಿಲ್ಲ. ಅದು ಯಾವುದಾದರೂ ಅಕ್ಷರದ ಜೊತೆಗೆ ಸೇರಿಕೊಂಡಾಗ ಅದು ಉಚ್ಛರಿಸಲ್ಪಡುತ್ತದೆ. ಯೋಗಗವಾಹದಲ್ಲಿ ಎರಡು ವಿಧ.
೧. ಅನುಸ್ವರ - ಂ
೨. ವಿಸರ್ಗ - ಃ.
ಧನ್ಯವಾದಗಳು.
Comments
Post a Comment