Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಮಾನವ ಹಕ್ಕುಗಳ ದಿನ. ಡಿಸೆಂಬರ್ 10.

 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು, ಮಾನವರಿಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಜನರ ದೈಹಿಕ, ಸಾಮಾಜಿಕ, ಸಾಂಸ್ಕೃತಿಕ, ಯೋಗ ಕ್ಷೇಮ ಮತ್ತು ಕಲ್ಯಾಣ ವನ್ನು ಸುಧಾರಿಸುವ ಸಲುವಾಗಿ ಆಚರಿಸಲಾಗುತ್ತದೆ. 

* ಜಗತ್ತಿನಾದ್ಯಂತ ಜನರಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು,

* ಸಮಗ್ರ ಮಾನವ ಹಕ್ಕುಗಳ ಸ್ಥಿತಿ ಗತಿಗಳ ಪ್ರಗತಿಯ ಕುರಿತು ವಿಶ್ವ ಸಂಸ್ಥೆಗೆ ವರದಿ ಮುಟ್ಟಿಸಲು ,

* ಮಾನವ ಹಕ್ಕುಗಳ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಕಂಡುಕೊಂಡು, ಸರ್ವರಲ್ಲೂ ಸಮಾನತೆ ಮೂಡಿಸಲು ಪ್ರಯತ್ನಿಸುವುದು ಈ ದಿನದ ಪ್ರಮುಖ ಉದ್ದೇಶ ವಾಗಿದೆ. 

ಥೀಮ್:  ಅಸಮಾನತೆ ಕಡಿಮೆ ಮಾಡುವುದು ಮತ್ತು ಮಾನವ ಹಕ್ಕುಗಳನ್ನು ಪ್ರಚಲಿತಕ್ಕೆ ತರುವುದು. 


ಧನ್ಯವಾದಗಳು. 

Comments

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..