Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಯುನೆಸೆಫ್ ದಿನ. ಡಿಸೆಂಬರ್ 11.

ಯುನೆಸೆಫ್ ದಿನವನ್ನು ಪ್ರತಿ ವರ್ಷ ಡಿಸೆಂಬರ್ 11 ರಂದು ಆಚರಿಸಲಾಗುತ್ತದೆ. ಮಕ್ಕಳ ಜೀವನದ ಬಗ್ಗೆ ಜಾಗೃತಿ ಮೂಡಿಸಲು, ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಬಾಲ್ಯ ದಿಂದ ಹದಿಹರೆಯದ ವರೆಗಿನ ಅವರ ಅವಶ್ಯಕತೆ ಗಳನ್ನು ಪೂರೈಸಲು, ಸಹಾಯ ಮಾಡುತ್ತದೆ. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 1946 ಡಿಸೆಂಬರ್ 11 ರಂದು ಈ ದಿನವನ್ನು ಘೋಷಿಸಿತು. 

ಈ ದಿನವು ಮಕ್ಕಳ ಆರೋಗ್ಯ ಪೋಷಣೆ,  ಶಿಕ್ಷಣ, ಮತ್ತು ಮಕ್ಕಳ ಸಾಮರ್ಥ್ಯ ಕಲ್ಯಾಣ ವನ್ನು ಸುಧಾರಿಸುವ ಉದ್ದೇವನ್ನು ಹೊಂದಿದೆ. 

ಥೀಮ್: ಕಳೆದ ಎರಡು ವರ್ಷಗಳಲ್ಲಿ  ಸಾಂಕ್ರಾಮಿಕ ರೋಗದಿಂದ ಅನುಭವಿಸಿದ ಅಡಚಣೆಗಳು ಮತ್ತು ಕಲಿಕೆಯ ನಷ್ಟಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವುದು. 

ಧನ್ಯವಾದಗಳು. 

Comments

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..