Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋದಿ ದಿನ. ಡಿಸೆಂಬರ್ 9

ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಜಾಗತಿಕ ಅನಾರೋಗ್ಯ ವನ್ನು ಎದುರಿಸಲು ಡಿಸೆಂಬರ್ 9ನ್ನು ಅಂತರರಾಷ್ಟ್ರೀಯ ಭ್ರಷ್ಟಾಚಾರ ದ ವಿರೋಧಿ ದಿನವನ್ನು ಜಾಗತಿಕ ವಾಗಿ ಆಚರಿಸಲಾಗುತ್ತದೆ. ಭ್ರಷ್ಟಾಚಾರ ದ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಮಾಜದ ಪಾತ್ರವನ್ನು ಗುರುತಿಸಿ , ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 

ಥೀಮ್: "ನಿಮ್ಮ ಹಕ್ಕು, ನಿಮ್ಮ ಪಾತ್ರ, ಭ್ರಷ್ಟಾಚಾರ ಬೇಡ ಎಂದು ಹೇಳಿ" .         
 ಭ್ರಷ್ಟಾಚಾರವನ್ನು ಎದುರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವವಾದುದು ಎಂಬ ವಿಚಾರವನ್ನು ಇದು ಒತ್ತಿ ಹೇಳುತ್ತದೆ. 

Comments

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..