Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಭಾರತದ ರಾಷ್ಟ್ರ ಧ್ವಜ.

 ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿರುವ ನಮ್ಮ ರಾಷ್ಟ್ರ ಧ್ವಜವು ಮಧ್ಯದಲ್ಲಿ 24 ಗೆರೆಗಳಿಂದ ಕೂಡಿರುವ ಧರ್ಮಚಕ್ರವನ್ನು ಹೊಂದಿದೆ. ಇದನ್ನು ಭಾರತದ ರಾಜ್ಯಾಂಗ ರಚನಸಭೆಯು 1947 ಜುಲೈ 22 ರಂದು ಜಾರಿಗಗೊಳಿಸಿತು. ಧ್ವಜದ ಉದ್ದ ಹಾಗೂ ಅಗಲಗಳ ಪ್ರಮಾಣ 2:3 ಆಗಿದೆ. ಇದರಲ್ಲಿ ಕೇಸರಿ ಬಣ್ಣವು ಸ್ಥೈರ್ಯ, ತ್ಯಾಗಗಳನ್ನು, ಬಿಳಿ ಸತ್ಯ ಶಾಂತಿ ಗಳನ್ನು, ಹಸಿರು ಭರವಸೆ ಶೌರ್ಯಗಳನ್ನೂ ಸೂಚಿಸುತ್ತದೆ. ಇದನ್ನು ಹತ್ತಿ, ಉಣ್ಣೆ, ಅಥವಾ ರೇಷ್ಮೆ ಯ ಖಾದಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಧ್ವಜ ವನ್ನು ಹಾರಿಸುವಾಗ ಕೇಸರಿ ಬಣ್ಣ ಯಾವಾಗಲೂ ಮೇಲಿರಬೇಕು. ರಾಷ್ಟ್ರ ಧ್ವಜವನ್ನು ಏರಿಸುವ, ಇಳಿಸುವ, ಹಾಗೂ ಬಳಸುವ ಕ್ರಮವನ್ನು ಕುರಿತು ಭಾರತ ಸರ್ಕಾರ ಪರಿಷ್ಕೃತ ಧ್ವಜ ಸಂಹಿತೆ: 2002 ಪ್ರಕಟಿಸಿದೆ..

ಧನ್ಯವಾದಗಳು‌. 

Comments

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..